ಭೂಮಿಗೆ ಬಂದ ಭಗವಂತ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿಯಾಗಿದೆ . ಈ ಧಾರಾವಾಹಿಯು 2023ರ ಮಾರ್ಚ್ 20 ರಿಂದ 4 ಆಗಸ್ಟ್ 2024ರವೆಗೆ ಝೀ ಕನ್ನಡದಲ್ಲಿ ಪ್ರಥಮ ಪ್ರದರ್ಶನ ಗೊಂಡಿತು. ಈ ಧಾರಾವಾಹಿಯು ಹಿಂದಿ ಭಾಷೆಯ ನೀಲಿ ಛತ್ರಿ ವಾಲೆ ಯ ಅಧಿಕೃತ ರೀಮೆಕ್ ಆಗಿದೆ. ನವೀನ್ ಕೃಷ್ಣ, ಕಾರ್ತಿಕ್ ಸಾಮಗ್ ಮತ್ತು ಕೃತಿಕಾ ರವೀಂದ್ರ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. == ಕಥಾವಸ್ತು == ವೈಯಕ್ತಿಕ ಮತ್ತು ವೃತ್ತಿಯ ಜೀವನದಿಂದ ಒತ್ತಡಕ್ಕೊಳಗಾದ ಮಧ್ಯಮ ವರ್ಗದ ವ್ಯಕ್ತಿ ಶಿವ ಪ್ರಸಾದ್ ಭಗವಂತ ಶಿವನನ್ನು ಮಾನವ ರೂಪದಲ್ಲಿ ಭೇಟಿಯಾಗುತ್ತಾನೆ. ಭಗವಂತ ಶಿವ ಇವನಿಗೆ ಆತನ ಜೀವನದ ಸಂದಿಗ್ಧತೆಗಳ ಮೂಲಕ ಮಾರ್ಗದರ್ಶನ ನೀಡುತ್ತಾನೆ. === ಸಮಾಜಕ್ಕೆ ಸಂದೇಶ === ಧಾರಾವಾಹಿಯು ಮಧ್ಯಮವರ್ಗದ ಜೀವನದಲ್ಲಿ ಎದುರಾಗುವ ಗೊಂದಲಗಳು, ಸಮಸ್ಯೆಗಳ ಬಗ್ಗೆ ಗಮನಹರಿಸುತ್ತದೆ. ಸಾಮಾಜಿಕ ಪಿಡುಗು ಎಂದು ಭಾವಿಸುವ ವಿಚಾರಗಳನ್ನು ಎತ್ತಿತೋರಿಸುವ ಕೆಲಸವನ್ನು ಮಾಡುತ್ತಿದೆ. == ಪ್ರಸಾರ == ಧಾರಾವಾಹಿಯು ಮೊದಲಿಗೆ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9:30 ರಿಂದ 10ರ ವರೆಗೆ ಪ್ರಸಾರವಾಗಿತ್ತು. ಆದರೆ ಸೀತಾ-ರಾಮ ಧಾರಾವಾಹಿಯ ಪ್ರಸಾರದ ಕಾರಣದಿಂದ ಜುಲೈ 17 ರಿಂದ ರಾತ್ರಿ 10:00 ರಿಂದ 10:30ರ ವರೆಗೆ ತನ್ನ ಸಮಯದಲ್ಲಿ ಬದಲಾವಣೆ ಮಾಡಿತು. == ಪಾತ್ರವರ್ಗ == === ಮುಖ್ಯ ಭೂಮಿಕೆಯಲ್ಲಿ === ನವೀನ್ ಕೃಷ್ಣ:- ಶಿವ ಪ್ರಸಾದ್ ಪಾತ್ರದಲ್ಲಿ, ಗಿರಿಜಾ ಗಂಡನಾಗಿ. ಕಾರ್ತಿಕ್ ಸಾಮಗ :- ಭಗವಂತ ಶಿವನ ಪಾತ್ರದಲ್ಲಿ. ಕೃತಿಕಾ ರವೀಂದ್ರ:- ಗಿರಿಜಾ ಪಾತ್ರದಲ್ಲಿ. ಶಿವ ಪ್ರಸಾದ್ ಹೆಂಡತಿಯಾಗಿ. === ಇತರೆ === ಉಮೇಶ್:- ವಿಶ್ವನಾಥ್ ಪಾತ್ರದಲ್ಲಿ, ಶಿವ ಪ್ರಸಾದ್ ತಂದೆಯಾಗಿ. ಅಂಕಿತಾ ಜಯರಾಮ್:- ಪ್ರಣೀತಾ ಪಾತ್ರದಲ್ಲಿ, ಶಿವ ಪ್ರಸಾದ್ ಮತ್ತು ಗಿರಿಜಾ ಮಗಳಾಗಿ. ಅನುರಾಗ್:- ಸ್ಕಂದಾ ಪಾತ್ರದಲ್ಲಿ, ಶಿವ ಪ್ರಸಾದ್ ಮತ್ತು ಗಿರಿಜಾ ಮಗನಾಗಿ. ಬೆಂಗಳೂರು ನಾಗೇಶ್:- ಅನಂತ ದೇಶಪಾಂಡೆ ಶಶಿ ದೇಶಪಾಂಡೆ:- ವೀವೆಕ್ ದೇಶಪಾಂಡೆ ಡಿ.ಲಿಂಗರಾಜ್:- ಮೊಗ್ಗು ಸುರೇಶ್ ಗೌತಮಿ:- ಮಾರ್ಗರೆಟ್ ಮುರಳಿ:- ಬಾಸ್ಕರ್ ಬಾಲು:- ಬಾಬು ರವೀಂದ್ರನಾಥ:- ನಾಗರಾಜ್ ಪವನ್ ಕುಮಾರ್: ರಾಮಯ್ಯ == ರೂಪಾಂತರಗಳು == == ಬಾಹ್ಯಕೊಂಡಿಗಳು == ಭೂಮಿಗೆ ಬಂದ ಭಗವಂತ ಝೀ5 == ಉಲ್ಲೇಖಗಳು ==